ಧನುಷ್ಕೋಟಿ
 	ಒಂದು ತೀರ್ಥ.  ರಾಮೇಶ್ವರದ ಸಮೀಪದಲ್ಲಿದೆ.  ಪೂರ್ವ ಪಶ್ಚಿಮ ಸಮುದ್ರಗಳ ಸಂಗಮ ಸ್ಥಳ.   ಸೇತುವೆಯ ಮೇಲೆ ನಡೆದು ಬಂದು ಶತ್ರುಗಳು ತನ್ನನ್ನು ಪೀಡಿಸಿಯಾರೆಂಬ ವಿಭೀಷಣನ ಭೀತಿಯನ್ನು ನೀಗಲು ಶ್ರೀರಾಮಚಂದ್ರ ಅದರ ಕೊನೆಯೊಂದನ್ನು ತನ್ನ ಬಿಲ್ಲಿನಿಂದ ಒಡೆದನೆಂದೂ ಅದೇ ಧನುಷ್ಕೋಟಿ ಎಂಬ ಹೆಸರಿನ ತೀರ್ಥವಾಯಿತೆಂದೂ ಐತಿಹ್ಯ.  ಸ್ಕಾಂದಪುರಾಣದ ಬ್ರಹ್ಮಖಂಡದಲ್ಲಿ ಈ ತೀರ್ಥದ ದೀರ್ಘ ವಿವರಣೆ ಇದೆ.  ಇಲ್ಲಿ ಸ್ನಾನ ಮಾಡುವುದರಿಂದ ಸಕಲ ಪಾಪಗಳೂ ನಾಶವಾಗುವುವು ಪಿಂಡ ಪ್ರಧಾನ ಮಾಡುವುದರಿಂದ ಕಲ್ಪದ ಅಂತ್ಯದವರೆಗೆ ಪಿತೃಗಳು ತೃಪ್ತಿಗೊಳ್ಳುವರು ಎಂಬ ನಂಬಿಕೆ ಇದೆ.
(ಎಸ್.ಎಂಎಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ